KHUMBHESWARA CREDIT CO-OP SOCIETY LTD

ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.

  • kumbheshwara.1988@gmail.com

    080-28398551

  • Home
  • About Us
    • History
    • Financial Status
  • Management
  • Loan
  • DEPOSIT
  • BRANCHES
  • GALLERY
  • Contact Us

History

  1. Home
  2. History
  • Our History

ಸದಸ್ಯರ ಸಹಕಾರದಿಂದ ಬೆಳ್ಳಿಹಬ್ಬ ಆಚರಿಸಿ ಯಶಸ್ವಿಯಾಗಿ ಮುನ್ನೆಡೆಯುತ್ತಿರುವ “ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,” ಬೆಂಗಳೂರು-73

“ಕೊಂಬು ಹೋರಿಗೆ ಲೇಸು, ತುಂಬು ಕೇರಿಗೆ ಲೇಸು, ಕುಂಬಾರ ಲೇಸು ಊರಿಗೆ ಹರದಂಗೆ ನಂಬುಗೆಯು ಲೇಸು ಸರ್ವಙ್ಞ!

ಸಹಕಾರವು ಸಾಮೂಹಿಕ ಜೀವನದ ಒಂದು ಆದರ್ಶ ಮಾರ್ಗವಾಗಿದೆ. ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು, ಪ್ರಾಮಾಣಿಕ ಸಹಭಾಗಿತ್ವದಿಂದ ದುಡಿಯುವುದು ಸಹಕಾರದ ಮುಖ್ಯ ಲಕ್ಷಣವಾಗಿದೆ. ಅಬಲವರ್ಗದವರ ಆರ್ಥಿಕ ಅಭ್ಯುದಯಕ್ಕಾಗಿ ಜನ್ಮತಾಳಿದಂತಹ ಈ ಕ್ಷೇತ್ರವು ಇಂದು ಪ್ರತಿಯೊಂದು ವಲಯ, ವರ್ಗ, ಸಮುದಾಯ ಹೀಗೆ ಎಲ್ಲ ಕಡೆ ವ್ಯಾಪಿಸಿದೆ. ಸ್ವಾವಲಂಬನೆಯ ಮೂಲಕ ಪ್ರತಿಯೊಬ್ಬ ವ್ಯೆಕ್ತಿ, ಕುಟುಂಬ, ಸಮುದಾಯ ಆರ್ಥಿಕವಾಗಿ ಮುನ್ನಡೆಯಲು ಸಹಕರಿಸುತ್ತದೆ ಈ ಕ್ಷೇತ್ರ ಹೀಗೆ ಬೆಂಗಳೂರಿನಲ್ಲಿ ಕುಂಬಾರ ಜನಾಂಗದ ಸರ್ವತೋಮುಖವಾದ ಅಭಿವೃದ್ಧಿಗಾಗಿ ಸ್ಥಾಪನೆಯಾದಂತಹ ಸಂಸ್ಥೆಯೇ ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ. ಈ ಸೊಸೈಟಿಯು ಈಗಾಗಲೇ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದ್ದು, ಸದಸ್ಯರುಗಳ ಆರ್ಥಿಕ ಅಭ್ಯುದಯಕ್ಕೆ ಆದ್ಯತೆಯನ್ನು ನೀಡುತ್ತಾ, ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ದಿನಾಂಕ 24/07/1985 ರಂದು “ಐ.ಟಿ.ಐ ಕಾರ್ಮಿಕರ ಕುಂಬಾರ ಸಂಘ”ದ ಸಹಭಾಗಿತ್ವದಲ್ಲಿ ಬೆಂಗಳೂರು ಲಾಲ್‌ಬಾಗ್ ಹತ್ತಿರದ ಗುಟ್ಟೆ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಜ್ಯ ಮಟ್ಟದ ಕುಂಬಾರ ಮಹಾ ಸಮ್ಮೇಳನದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಸರ್ವತೋಮುಖ ಅಭಿವೃದ್ದಿಗಾಗಿ “ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ” ಯನ್ನು ಸ್ಥಾಪನೆ ಮಾಡಲು ನಿರ್ದರಿಸಲಾಯಿತು, ಕುಂಬಾರ ಜನಾಂಗದ ಮುಖಂಡರುಗಳಾದ ಶ್ರೀ ಆಂಜನಪ್ಪ, ಟಿ.ತಮ್ಮಯ್ಯ, ಸಿ.ಚಿನ್ನಪ್ಪ, ಕೆ.ಎಂ.ನಂಜುಂಡಪ್ಪ, ಹೆಚ್.ಬಿ.ಕೊಂಡಪ್ಪ, ಜಿ.ಸಿದ್ದನಂಜಶೆಟ್ಟಿ, ಇನ್ನು ಮುಂತಾದ ಕುಂಬಾರ ಸಮಾಜದ ಹಿರಿಯರ, ಮುಖಂಡರ ಹಾಗೂ ಅನೇಕ ಗಣ್ಯರ ಪರಿಶ್ರಮದಿಂದ ಪ್ರಾರಂಬಿಸಿದ ಈ ಸಂಸ್ಥೆಯನ್ನು ದಿನಾಂಕ 02/10/1988 ರಂದು ಜನಾಂಗದ ಗಣ್ಯರಾದ ಮಾಜಿ ಸಚಿವರು ಆದ ಪ್ರೋ|| ಎ. ಲಕ್ಷ್ಮಿಸಾಗರ್, ಮೇಯರ್ ಸುಂದರರಾಜು ರವರ ಉಪಸ್ಥಿತಿಯಲ್ಲಿ ಅಂದಿನ ವಸತಿ ಮತ್ತು ನಗರಾಬಿವೃದ್ದಿ ಸಚಿವ ಶ್ರೀ ಆರ್.ವಿ. ದೇಶಪಾಂಡೆಯವರಿಂದ ಉದ್ಗಾಟಿಸಲಾಯಿತು. ಪ್ರಥಮ ಅದ್ಯಕ್ಷರಾಗಿ ಶ್ರೀ ಜಿ.ಸಿದ್ದನಂಜಶೆಟ್ಟಿ ಹಾಗೂ ಅಂದು ಅದಿಕಾರಕ್ಕೆ ಬಂದ ಆಡಳಿತ ಮಂಡಳಿಯ ಶ್ರಮದಿಂದ 500 ಜನ ಸದಸ್ಯರಿಂದ ಹಾಗೂ 1,00,000.00 ಷೇರು ಬಂಡವಾಳದೊಂದಿಗೆ ಪ್ರಾರಂಬಿಸಲಾಯಿತು, ಅಂದಿನಿಂದ ಪ್ರತಿ ವರ್ಷವೂ ಲಾಭದಾಯಕವಾಗಿ ಪ್ರಗತಿಯತ್ತ ಸಾಗುತ್ತಿದೆ, ಪ್ರಾರಂಭದಲ್ಲಿ ಜಗಜೀವನರಾಂ ನಗರದಲ್ಲಿ ಪ್ರಾರಂಬಿಸಿ ನಂತರ ಕುಂಬಾರ ಸಂಘ (ರಿ) ಬೆಂಗಳೂರು ಇಲ್ಲಿ ಕಾರ್ಯಾರಂಭ ಮಾಡಲಾಯಿತು, 27/03/2005 ರಿಂದ ನೂತನ ಅಧ್ಯಕ್ಷರಾದ ಶ್ರೀ ದೇವರಾಜು ರವರ ಮುಖಂಡತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳ ಉತ್ತಮ ಸಹಕಾರದಿಂದ ಹಾಗೂ ನಿಸ್ವಾರ್ಥ ಸೇವೆಯಿಂದ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಿಗೂ ವಿಸ್ತರಿಸಲಾಯಿತು, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೇವರಾಜು, ಉಪಾಧ್ಯಕ್ಷರಾದ ಶ್ರೀ ಡಿ.ನಾಗರಾಜು ಮತ್ತು ಕಟ್ಟಡ ನಿರ್ಮಾಣ ವಸ್ತುವಾರಿ ಸಮಿತಿಯ ಅಧ್ಯಕ್ಷರಾದ ಹಾಗೂ ಸಂಸ್ಥೆಯ ಖಜಾಂಚಿಗಳಾಗಿದ್ದ ಶ್ರೀ ಕೆ.ಎಂ.ಗಂಗಣ್ಣನವರು, ಸದಸ್ಯರಾದ ಶ್ರೀ ಕೆ.ಎಂ ಸುಬ್ಬರಾಯಪ್ಪ, ಬಾಲಕುಮಾರ್, ಪಿ.ನಾಗರಾಜು, ಎಂ.ಬಿ.ರುಕ್ಕಣ್ಣ ಮುಂತಾದವರ ಉಸ್ತುವಾರಿಯಲ್ಲಿ ಹಾಗೂ ಸಂಸ್ಥೆಯ ಎಲ್ಲಾ ನಿರ್ದೇಶಕರುಗಳ ಪರಿಶ್ರಮದಿಂದ ಮತ್ತು ಸಂಸ್ಥೆಯ ಸದಸ್ಯರುಗಳು ಮತ್ತು ಇತರೆ ಗಣ್ಯ ವ್ಯಕ್ತಿಗಳಿಂದ ಸಂಗ್ರಹಿಸಿದ ದೇಣಿಗೆ ಹಾಗೂ ಸಂಸ್ಥೆಯ ಕಟ್ಟಡ ನಿಧಿಯಿಂದ ಒಗ್ಗೂಡಿಸಿ ಸುಮಾರು 1.5 ಕೋಟಿ ವ್ಯೆಚ್ಚದಲ್ಲಿ ನಗರದ ಪ್ರತಿಷ್ಠಿತ ಬಡಾವಣೆಗಳೊಂದಾದ ಎಂ.ಎಸ್.ರಾಮಯ್ಯ ಎನ್‌ಕ್ಲೇವ್, 8ನೇ ಮೈಲು ಸರ್ಕಲ್ ಹತ್ತಿರ, ತುಮಕೂರು ರಸ್ತೆ, ಬೆಂಗಳೂರು-73, ಇಲ್ಲಿ 80*30 ಅಳತೆಯ ನಿವೇಶನದಲ್ಲಿ ಮೂರು ಅಂತಸ್ಥಿನ “ಕುಂಭೇಶ್ವರ ಸಹಕಾರ ರಜತ ಭವನ”ವನ್ನು ನಿರ್ಮಿಸಿ, ಸಂಸ್ಥೆಯು 25 ವರ್ಷ ತುಂಬಿದ ಕುರುಹಾಗಿ ‘ಬೆಳ್ಳಿಹಬ್ಬ’ ಆಚರಿಸಿದ ಸಂದರ್ಭದಲ್ಲಿ ಸಂಸ್ಥೆಗೆ ಸಮರ್ಪಿಸಿ ದಿನಾಂಕ: 30/11/2014 ರಂದು ಪೂಜ್ಯ ಶ್ರೀ ಶ್ರೀ ಬಸವ ಕುಂಬಾರ ಮಹಾಸ್ವಾಮೀಜಿಯ ದಿವ್ಯ ಸಾನಿಧ್ಯದಲ್ಲಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರಿಂದ ಉದ್ಗಾಟಿಸಲಾಯಿತು, ಹಾಗೂ “ಬೆಳ್ಳಿ ಕುಂಭ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು, ದಿನಾಂಕ:14/03/2015 ರಿಂದ 27/11/2016 ರವರೆಗೆ ಟಿ.ಕೆ. ಜಯಣ್ಣನವರು ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದು ತದನಂತರ ಶ್ರೀ ದೇವರಾಜು ರವರು ದಿನಾಂಕ: 02.03.2020 ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ, ನಂತರ ದಿನಾಂಕ: 02.03.2020 ರಿಂದ ಶ್ರೀ ಜಿ.ಶಿವಕುಮಾರ್ ರವರು ಅಧ್ಯಕ್ಷರಾಗಿರುತ್ತಾರೆ, ಸಂಸ್ಥೆಯ ಕಾರ್ಯಪ್ರಗತಿಯು ಯಶಸ್ವಿಯಾಗಿ ನಡೆಯುತ್ತಿದ್ದು ಸುಮಾರು 5000 ಸದಸ್ಯರನ್ನು ಹೊಂದಿದ್ದು ಬಡ ಜನರಿಗೆ, ಮದ್ಯಮವರ್ಗದವರಿಗೆ, ಕಾರ್ಮಿಕರಿಗೆ ಹಾಗೂ ಇತರೆ ಹಿಂದುಳಿದ ವರ್ಗದ ಸದಸ್ಯರಿಗೆ ಗೃಹಕೃತ್ಯಕ್ಕೆ, ಮದುವೆ ಮುಂಜಿಗಳಿಗೆ, ಮಕ್ಕಳ ವಿದ್ಯಾಬ್ಯಾಸಕ್ಕೆ, ನಿವೇಶನ ಖರೀದಿಸಲು, ಮನೆ ಕಟ್ಟಲು, ಇಂತಹ ಅನೇಕ ಉಪಯೋಗಗಳಿಗೆ ಐದು ಲಕ್ಷದವರೆಗೆ ಸಾಲ ನೀಡುತ್ತಾ ಬಂದಿರುತ್ತದೆ, ನಂತರ ನೂತನ ಕಟ್ಟಡ ‘ಕುಂಭೇಶ್ವರ ಸಹಕಾರ ರಜತ ಭವನದಲ್ಲಿ’ ಸಂಸ್ಥೆಯು ಕೇಂಧ್ರ ಕಛೇರಿಯನ್ನು ಪ್ರಾರಂಬಿಸಿ ಕಲಾಸಿಪಾಳ್ಯಂ ನಲ್ಲಿರುವುದನ್ನು ಶಾಖಾ ಕಛೇರಿಯಾಗಿ ಪರಿವರ್ತಿಸಲಾಗಿರುತ್ತದೆ, ಸಂಸ್ಥೆಯು ಪ್ರಾರಂಭದಿಂದಲೂ ಲಾಭದಾಯಕವಾಗಿ ಪ್ರಗತಿ ಹೊಂದುತ್ತಾ ಬಂದಿದ್ದು ಸಂಸ್ಥೆಯ ಪ್ರಗತಿಯು ಈ ಕೆಳಕಂಡಂತಿರುತ್ತದೆ.

ಶ್ರೀ ಕುಂಭೇಶ್ವರ ಸೊಸೈಟಿ

ಸದಸ್ಯರ ಸಹಕಾರದಿಂದ ಬೆಳ್ಳಿಹಬ್ಬ ಆಚರಿಸಿ ಯಶಸ್ವಿಯಾಗಿ ಮುನ್ನೆಡೆಯುತ್ತಿರುವ “ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,” ಬೆಂಗಳೂರು-73 ಕೊಂಬು ಹೋರಿಗೆ ಲೇಸು, ತುಂಬು ಕೇರಿಗೆ ಲೇಸು, ಕುಂಬಾರ ಲೇಸು ಊರಿಗೆ ಹರದಂಗೆ ನಂಬುಗೆಯು ಲೇಸು ಸರ್ವಙ್ಞ!

Quick Links

  • About Us
  • Management
  • Loan
  • Deposit
  • Financial Status
  • Branches
  • Gallery
  • Contact Us

ಕೇಂದ್ರ ಕಛೆೇರಿ:

ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.

ಕುಂಭೇಶ್ವರ ಸಹಕಾರ ರಜತ ಭವನ, ನಂ. 125 & 168, 2 ನೇ ಅಡ್ಡರಸ್ತೆ,

3 ಮತ್ತು 4 ನೇ ಮುಖ್ಯರಸ್ತೆ, ಎಂ. ಎಸ್ . ರಾಮಯ್ಯ ಏನ್ ಕ್ಲೇವ್,

8 ನೇ ಮೈಲಿ ಸರ್ಕಲ್ ಹತ್ತಿರ, ತುಮಕೂರು ರಸ್ತೆ , ಬೆಂಗಳೂರು - 560073

ಫೋನ್: 080-28398551

Designed by Grosbeak Tech Sol Team @ 2023 SRI KUMBHESHWARA CREDIT CO-OP SOC LTD. All Rights Reserved.